ನನ್ನ ಹೆಸರೇ ಅವನ ಹೆಸರು... ಆದರೂ ಅವನು ಚಿರಪರಿಚಿತನಾಗಿದ್ದು ರಾಜ ಎನ್ನುವ ನಾಮದೇಯದಿಂದ...ನನ್ನ ಮತ್ತು ಅವನ ಅಭಿರುಚಿಗಳು.. ರುಚಿಗಳು.. ಎಲ್ಲವೂ ಒಂದು ಬಿಂಬ ಮತ್ತು ಪ್ರತಿಬಿಂಬದಂತಿತ್ತು.. ಅದಕ್ಕೆ ಬ್ಲಾಗ್ ಶೀರ್ಷಿಕೆ ಕೂಡ ಹಾಗೆಯೇ ಮಾಡಿದ್ದೇನೆ..
ಅವನನ್ನು ಹಲವಾರು ಮಂದಿ ಒಬ್ಬ ತಮಾಷೆಯ ವಸ್ತುವನ್ನಾಗಿ ನೋಡಿದ್ದೇ ಹೆಚ್ಚು.. ಆದರೆ ಅವನಲ್ಲಿ ಅಡಗಿದ್ದ.. ವಿಶ್ವಾಸ, ಪ್ರೀತಿ ಮಕ್ಕಳನ್ನು ಕಂಡರೆ.. ಪ್ರೀತಿ.. ಚಲನಚಿತ್ರಗಳ ಬಗ್ಗೆ ಇದ್ದ ಅಪರಿಮಿತ ಪ್ರೀತಿ..
ನನ್ನ ಮತ್ತು ಅವನ ನಡುವೆ ಇದ್ದ ಪ್ರತಿ ಘಟನೆಗಳನ್ನು ಈ ವ್ಯಾವಹಾರಿಕ ಪ್ರಪಂಚದ ಮುಂದೆ ತೆರೆದು ಇಡಬೇಕು.. ಬರಿ ಹಣ.. ವಸ್ತು.. ಅಧಿಕಾರ ಇವುಗಳಿಂದ ಮನುಷ್ಯನಾಗುವುದಿಲ್ಲ ಬದಲಿಗೆ ಅಂತಃಕರಣ ಇರಬೇಕು.. ಮಮತೆ ಪ್ರೀತಿ ವಿಶ್ವಾಸ ಇರಬೇಕು ಎನ್ನುವ ತತ್ವ ಉಳ್ಳವನು ಅವನು..
ಎದೆ ತಟ್ಟಿ ಹೇಳಿಕೊಳ್ಳುತ್ತೇನೆ ಇಂತಹ ಒಂದು ಸುಂದರ ಮಾನವ ಜೀವಿಯ ಜೊತೆ ನನ್ನ ಹೆಸರು ಇರುವುದು ನನಗೆ ಸಿಕ್ಕ ಭಾಗ್ಯ ಎಂದು..
ಅವನ ಇರುವಿಕೆ ಇಲ್ಲದೆ ನಮ್ಮ ನೆಂಟರಿಷ್ಟರ ಯಾವುದೇ ಸಮಾರಂಭ ಕಳೆ ಕಟ್ಟುತ್ತಿರಲಿಲ್ಲ.. ಅವನು ಎಷ್ಟರ ಮಟ್ಟಿಗೆ ನಮ್ಮೊಡನೆ ಬೆರೆತಿದ್ದ ಅಂದರೆ.. ಅವನ ವೈಕುಂಠ ಸಮಾರಾಧನೆ ದಿನ.. ಅಯ್ಯೋ ರಾಜ ಒಬ್ಬ ಬಂದಿಲ್ಲ ಎಂದು ಅವನನ್ನು ಸುತ್ತ ಮುತ್ತಲು ಹುಡುಕುತ್ತಿತ್ತು ನನ್ನ ಕಂಗಳು...
ರಾಜ.. ಬಾ.. ಅಕ್ಷರ ಅಕ್ಷರವಾಗಿ ನನ್ನ ಹೃದಯದಿಂದ ಹೊರಗೆ ಬಾ.. ನಿನಗಾಗಿ ನಿನ್ನ ನೆನಪುಗಳು..
...............................
...............................
ಸಾಕು ಕಣ್ಣುಗಳು ತುಂಬಿ ಬರುತ್ತಿವೆ..
...............................
...............................
ಸಾಕು ಕಣ್ಣುಗಳು ತುಂಬಿ ಬರುತ್ತಿವೆ..
ಮೊದಲ ಬಾರಿಗೆ ಕಂಗಳು ತುಂಬಿ ಬರುತ್ತಿವೆ...