ನನ್ನ ಹೆಸರೇ ಅವನ ಹೆಸರು... ಆದರೂ ಅವನು ಚಿರಪರಿಚಿತನಾಗಿದ್ದು ರಾಜ ಎನ್ನುವ ನಾಮದೇಯದಿಂದ...ನನ್ನ ಮತ್ತು ಅವನ ಅಭಿರುಚಿಗಳು.. ರುಚಿಗಳು.. ಎಲ್ಲವೂ ಒಂದು ಬಿಂಬ ಮತ್ತು ಪ್ರತಿಬಿಂಬದಂತಿತ್ತು.. ಅದಕ್ಕೆ ಬ್ಲಾಗ್ ಶೀರ್ಷಿಕೆ ಕೂಡ ಹಾಗೆಯೇ ಮಾಡಿದ್ದೇನೆ..
ಅವನನ್ನು ಹಲವಾರು ಮಂದಿ ಒಬ್ಬ ತಮಾಷೆಯ ವಸ್ತುವನ್ನಾಗಿ ನೋಡಿದ್ದೇ ಹೆಚ್ಚು.. ಆದರೆ ಅವನಲ್ಲಿ ಅಡಗಿದ್ದ.. ವಿಶ್ವಾಸ, ಪ್ರೀತಿ ಮಕ್ಕಳನ್ನು ಕಂಡರೆ.. ಪ್ರೀತಿ.. ಚಲನಚಿತ್ರಗಳ ಬಗ್ಗೆ ಇದ್ದ ಅಪರಿಮಿತ ಪ್ರೀತಿ..
ನನ್ನ ಮತ್ತು ಅವನ ನಡುವೆ ಇದ್ದ ಪ್ರತಿ ಘಟನೆಗಳನ್ನು ಈ ವ್ಯಾವಹಾರಿಕ ಪ್ರಪಂಚದ ಮುಂದೆ ತೆರೆದು ಇಡಬೇಕು.. ಬರಿ ಹಣ.. ವಸ್ತು.. ಅಧಿಕಾರ ಇವುಗಳಿಂದ ಮನುಷ್ಯನಾಗುವುದಿಲ್ಲ ಬದಲಿಗೆ ಅಂತಃಕರಣ ಇರಬೇಕು.. ಮಮತೆ ಪ್ರೀತಿ ವಿಶ್ವಾಸ ಇರಬೇಕು ಎನ್ನುವ ತತ್ವ ಉಳ್ಳವನು ಅವನು..
ಎದೆ ತಟ್ಟಿ ಹೇಳಿಕೊಳ್ಳುತ್ತೇನೆ ಇಂತಹ ಒಂದು ಸುಂದರ ಮಾನವ ಜೀವಿಯ ಜೊತೆ ನನ್ನ ಹೆಸರು ಇರುವುದು ನನಗೆ ಸಿಕ್ಕ ಭಾಗ್ಯ ಎಂದು..
ಅವನ ಇರುವಿಕೆ ಇಲ್ಲದೆ ನಮ್ಮ ನೆಂಟರಿಷ್ಟರ ಯಾವುದೇ ಸಮಾರಂಭ ಕಳೆ ಕಟ್ಟುತ್ತಿರಲಿಲ್ಲ.. ಅವನು ಎಷ್ಟರ ಮಟ್ಟಿಗೆ ನಮ್ಮೊಡನೆ ಬೆರೆತಿದ್ದ ಅಂದರೆ.. ಅವನ ವೈಕುಂಠ ಸಮಾರಾಧನೆ ದಿನ.. ಅಯ್ಯೋ ರಾಜ ಒಬ್ಬ ಬಂದಿಲ್ಲ ಎಂದು ಅವನನ್ನು ಸುತ್ತ ಮುತ್ತಲು ಹುಡುಕುತ್ತಿತ್ತು ನನ್ನ ಕಂಗಳು...
ರಾಜ.. ಬಾ.. ಅಕ್ಷರ ಅಕ್ಷರವಾಗಿ ನನ್ನ ಹೃದಯದಿಂದ ಹೊರಗೆ ಬಾ.. ನಿನಗಾಗಿ ನಿನ್ನ ನೆನಪುಗಳು..
...............................
...............................
ಸಾಕು ಕಣ್ಣುಗಳು ತುಂಬಿ ಬರುತ್ತಿವೆ..
...............................
...............................
ಸಾಕು ಕಣ್ಣುಗಳು ತುಂಬಿ ಬರುತ್ತಿವೆ..
ಮೊದಲ ಬಾರಿಗೆ ಕಂಗಳು ತುಂಬಿ ಬರುತ್ತಿವೆ...
ಜನರ ನಡುವೆ ಇದ್ದು ಎಲ್ಲರ ವಿಶ್ವಾಸ, ಪ್ರೀತಿ ಗಳಿಸಿ, ಅವರ ಮನಗೆದ್ದು ಜೀವಿಸುವುದು ಅಷ್ಟು ಸುಲಭವಲ್ಲ, ಆದರೆ ನಿಮ್ಮ ಈ ನಾಯಕ ಬಹಳ ಒಳ್ಳೆಯ ಮನಸಿನ ಹೃದಯವಂತಾ ಅನ್ನಿಸುತ್ತದೆ, ಎಲ್ಲರ ಪ್ರೀತಿಗೆ ಪಾತ್ರನಾಗಿ ಸಾವಿನನಂತರವೂ ಅವನು ಇದ್ದಿದ್ದರೆ ಎಂಬ ವಾತಾವರಣ ಸೃಷ್ಟಿಸಿದ ಅವರ ಬಗ್ಗೆ ಬಹಳ ಗೌರವ ಮೋದಿದೆ. ಇದ್ದಾರೆ ಇರಬೇಕು ಹೀಗೆ , ಒಳ್ಳೆಯ ನೆನಪಿನ ಕಾನಿಗೆ ಶ್ರೀಕಾಂತ್ ಸಾರ್ [ ಮೊದಲ ಬ್ಲಾಗ್ ಪೋಸ್ಟ್ ಗೆ ಮೊದಲ ಅನಿಸಿಕೆ ನನ್ನದು ]
ReplyDelete
ReplyDeleteಭಾವಗಳು ಹಾಡಾಗುತ್ತವೆ ಇಲ್ಲಿ..
.
ಸುಮಧುರ ಸಂಬಂಧದ ಅನಾವರಣ...
ಪ್ರೀತಿಯ ಶ್ರೀ...
ReplyDeleteಕೆಲವರು ಹಾಗೆ ಇರುತ್ತಾರೆ...
ಅವರು ನಮ್ಮನ್ನು ಆವರಿಸಿಕೊಂಡಿರುವ ಪರಿ ನಮಗೆ ಗೂತ್ತೇ ಆಗಿರುವದಿಲ್ಲ...
ಅಳಿದ ನಂತರವೂ
ಅವರು
ಉಳಿದುಬಿಡುತ್ತಾರೆ
ನೆನಪುಗಳಾಗಿ ನಮ್ಮ ಹೃದಯದೊಳಗೆ...
we miss him a lot.. raajanaagiye yellara manassinallu ulidiruva maava
ReplyDeleteSwalpa hottina munche abhishekada hale chitragalanna nodthiddaga yellara jothe nagtha ero drushya nodi bahala bejar aitu. evattu nam jothe illa anta.
ReplyDeleteThere is never a day that I dont think about him. He was there with us for all ups and downs of our lives and will continue to be with us forever
ReplyDeleteಬಹಳ ದಿನಗಳ ನಿಮ್ಮ ಆಸೆ ಈ ಬ್ಲಾಗ್ ಬರೀಬೇಕು ಅಂತ. ನೆನಪಿನ ತಿಜೋರಿಯೊಳಗೆ ಕಾಲಿಟ್ಟಿದ್ದೀರಿ. ಇಂತಹ ಒಂದು ವ್ಯಕ್ತಿಯ ಪರಿಚಯ ನಮಗೂ ಆಗಲಿ. ಶುಭವಾಗಲಿ
ReplyDeleteAm speechless, want to hear more about him... Raja Sir, you are alive in Sri and his words.
ReplyDeleteಆಡದೇ ಉಳಿದಿಹ ಮಾತು ನೂರಿವೆ..
ReplyDeleteಕಣ್ಣಂಚು ಮಾತಾಡುತಿದೆ...
ಒಂದಿಷ್ಟು ಭಾವಬಂಧಗಳೇ ಹಾಗೇನೋ ಅಲ್ವಾ ? ಅವರಳಿದ ನಂತರವೂ ಮನದಲ್ಲಿ ಯಾವಾಗ್ಲೂ ಇದ್ದುಬಿಟ್ಟಿರ್ತಾರೆ ನೆನಪಾಗಿ,ಪ್ರೀತಿಯಾಗಿ,ಖುಷಿಯಾಗಿ...ಸದಾ.
ಭಾವವೊಂದಕ್ಕೆ ಇಷ್ಟು ತೀವ್ರತೆ ಇರಬಹುದೆಂಬ ಕಲ್ಪನೆಯೂ ಇದ್ದಿರಲಿಲ್ಲ ನೀವವತ್ತು ಈ ಶ್ರೀಕಾಂತ್ ಮಾವನ ಬಗ್ಗೆ ಹೇಳಿದಾಗ...ಅವತ್ತು ನಿಮ್ಮ ಗಂಟಲು ಕಟ್ಟಿ ಬಂದಿತ್ತು.ಇವತ್ತು ನಿಮ್ಮೊಟ್ಟಿಗೆ ನನ್ನ ಗಂಟಲೂ ಕೂಡಾ...
ಭಾವ ಸಾಗರ ಹರಿದುಬಿಡಲಿ ಅಣ್ಣಾ..ಭಾವದಲೆಯಲ್ಲಿ ನಾವೂ ತೇಲಿಹೋಗ್ತೀವಿ ಹೀಗೆಯೆ.
ಆತ್ಮಬಂಧು ಶ್ರೀಕಾಂತ್ ಮಾವನಿಗೆ ನಮಿಸಿ..
ಮುಂದಿನ ಭಾವದ ನಿರೀಕ್ಷೆಯಲ್ಲಿ
ಕೆಲ ವ್ಯಕ್ತಿತ್ವಗಳು ಮನಸಲ್ಲಿ ನಾಟಿಬಿಡುವ ನೆನಪನ್ನು ಉಳಿಸುತ್ತವೆ...ಇಂತಹ ಮನಮುಟ್ಟುವ ಸಂಬಂಧಗಳ ನವಿರು ಎಳೆಗಳನ್ನು ಬಿಡಿಸಿ ಓದುಗನ ಮನಮುಟ್ಟಿಸುವ ಕಲೆ ಶ್ರೀಮನ್..ಕರಗತ ನಿಮಗೆ ಎನ್ನುವುದರಲ್ಲಿ ಎರಡು ಮಾತಿಲ್ಲ... ಚನ್ನಾದ ಪರಿಚಯ
ReplyDeleteಏಳನೇ ಬ್ಲಾಗಿಗೆ ಅಭಿನಂದನೆಗಳು.
ReplyDeleteಗೆಳೆತನ ಅಂದರೆ ಹೀಗಿರಬೇಕು.
ತಮಾಷೆಯ ಒಡಲಲ್ಲೇ ಭಾವದ ಹಾಡು ಜಿನುಗುವುದು... :)
ReplyDeleteನಗುವಿನ ಮೊಗದಲ್ಲೇ ಆತ್ಮೀಯು ಒಸರುವುದು... :)
ಚೆನ್ನಾಗಿದೆ...
ReplyDeletehttp://spn3187.blogspot.in/